ಯೋಗದಿಂದ ಜೀರ್ಣಶಕ್ತಿಯನ್ನು ಸಹಜವಾಗಿ ಹೆಚ್ಚಿಸಿಕೊಳ್ಳುವ ರೀತಿ

ಆರೋಗ್ಯಕರವಾದ ಜೀವನಶೈಲಿಯ ಒಂದು ಮುಖ್ಯ ಸ್ತಂಭವೆಂದರೆ ಒಳ್ಳೆಯ ಜೀವನ ವಿಧಾನ. ಒಬ್ಬರ ಪಾಚಕ ವ್ಯವಸ್ಥೆಯು ಉತ್ತಮವಾದ ಸ್ಥಿತಿಯಲ್ಲಿದ್ದರೆ, ಮಲಬದ್ಧತೆ, ಹೊಟ್ಟೆ ನೋವು, ವ್ರಣಗಳು, ಮೊಡವೆಗಳು, ಹೊಟ್ಟೆಯುಬ್ಬರದಂತಹ ದೈಹಿಕ ಖಾಯಿಲೆಗಳು ಅವರನ್ನು ಪೀಡಿಸುವುದಿಲ್ಲ.

ಕೆಲವು ಮುಖ್ಯ ಸೂಚಿಗಳು:

  • ಊಟದ ಅರ್ಧ ಗಂಟೆಗೆ ಮೊದಲು ಮತ್ತು ಊಟವಾದ ಅರ್ಧಗಂಟೆಯ ನಂತರ ನೀರನ್ನು ಕುಡಿಯಿರಿ.
  • ರಾತ್ರಿಯ ವೇಳೆ ಭಾರಿ ಭೋಜನವನ್ನು ಮಾಡಬೇಡಿ.
  • ಊಟವಾದ ತಕ್ಷಣವೇ ಮಲಗಬೇಡಿ.
  • ನಿತ್ಯ ಯೋಗಾಭ್ಯಾಸವನ್ನು ಮಾಡಿ.
  • ಕರಿದ ಪದಾರ್ಥಗಳನ್ನು ಅಥವಾ ಜಂಕ್ ಆಹಾರಗಳನ್ನು ಸಾಧ್ಯವಾದಷ್ಟೂ ತಿನ್ನಬೇಡಿ.
  • ಹೆಚ್ಚು ನಾರಿನಾಂಶವುಳ್ಳ ಆಹಾರವನ್ನೇ ತಿನ್ನಿ.

ಅಜೀರ್ಣದ ಸಮಸ್ಯೆಗಳು

ಅಜೀರ್ಣದ ಸಮಸ್ಯೆಯು ಹೆಚ್ಚಾಗಿ ತಿನ್ನುವುದರಿಂದ, ಸರಿಯಾದ ಸಮಯದಲ್ಲಿ ಊಟ ಮಾಡದಿರುವುದರಿಂದ, ಅನಾರೋಗ್ಯಕರವಾದ ಆಹಾರದ ಅಭ್ಯಾಸಗಳನ್ನು ಹೊಂದಿರುವುದರಿಂದ, ಒತ್ತಡ ಪೂರ್ಣ ಜೀವನಶೈಲಿಯಿಂದ ಉಂಟಾಗುತ್ತದೆ. ಪಾಚಕ ವ್ಯವಸ್ಥೆಯಲ್ಲಿ ಏರುಪೇರಾದಾಗ ನಾವು ಊಟವನ್ನು ಮಾಡುವುದಿಲ್ಲ ಅಥವಾ ಪಿತ್ತದ ನಿಯಂತ್ರಣಕ್ಕಾಗಿ ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಇವು ಪರಿಣಾಮಕಾರಕವಾದರೂ ತತ್ಕಾಲಿಕವಾಗಿ ಮಾತ್ರ ಉಪಶಮನವನ್ನು ನೀಡುತ್ತವೆ.

ದೀರ್ಘಕಾಲೀನ ಪರಿಹಾರ

ನಮ್ಮ ದಿನನಿತ್ಯದ ಜೀವನಶೈಲಿಯಲ್ಲಿ ವಿಪರೀತ ಬದಲಾವಣೆಯನ್ನು ತರುವುದು ಕಷ್ಟವಾದರೂ ಕೆಲವು ಕ್ರಮಗಳನ್ನು ತೆಗೆದುಕೊಂಡು ನಮ್ಮ ಪಾಚಕ ವ್ಯವಸ್ಥೆಯನ್ನು ಪುನಶ್ಚೇತಗೊಳಿಸಿ, ಅದನ್ನು ಬಲಪಡಿಸಬಹುದು. ದೇಹವನ್ನು ಸುಸ್ಥಿತಿಗೆ ತರಲು ಯೋಗಕ್ಕಿಂತ ಬೇರೆ ಉತ್ತಮವಾದ ಉಪಾಯವಿಲ್ಲ. ಯೋಗದ ಪರಿಣಾಮಕಾರಕ ಪ್ರಭಾವವನ್ನು ಎಲ್ಲಾ ಕಾಲಗಳಲ್ಲೂ ರುಜುವಾತು ಪಡಿಸಲಾಗಿರುವುದಲ್ಲದೆ, ಯೋಗದಿಂದ ಯಾವ ಅಡ್ಡ ಪರಿಣಾಮಗಳೂ ಉಂಟಾಗುವುದಿಲ್ಲ. ಜೀವನಶೈಲಿಯಲ್ಲಿ ವಿಪರೀತ ಬದಲಾವಣೆಯನ್ನು ತರದೆಯೇ ದೇಹವನ್ನು ಯೋಗವು ಪರಿಣಾಮಕಾರಕವಾಗಿ ಸುಸ್ಥಿತಿಗೆ ತರಬಹುದು.

ಈ ಸರಳವಾದ ಯೋಗಾಸನಗಳನ್ನು ಅಭ್ಯಾಸ ಮಾಡುವುದರಿಂದ ನಿಮ್ಮ ಹೊಟ್ಟೆಯ ಅಂಗಾಂಗಗಳು ವಿಶ್ರಮಿಸಿ, ಪಾಚಕ ವ್ಯವಸ್ಥೆಯ ಚಟುವಟಿಕೆಯನ್ನು ಹೆಚ್ಚಿಸುತ್ತವೆ

ಉಷ್ಠ್ರಾಸನ (ಒಂಟೆಯ ಭಂಗಿ)

ಉಷ್ಠ್ರಾಸನವು ದೇಹದ ಮುಂದಿನ ಭಾಗವನ್ನು ತೆರೆದ ವಿಸ್ತರಣ ಮಾಡುತ್ತದೆ. ಇದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ಈ ಯೋಗಾಸನದಿಂದ ದೇಹ ಭಂಗಿಯೂ ಉತ್ತಮವಾಗಿ, ಋತುಚಕ್ರದ ಅಹಿತಕರವಾದ ನೋವಿನಿಂದಲೂ ಉಪಶಮನವನ್ನು ನೀಡುತ್ತದೆ.

ಪದ್ಮಾಸನ

ಪದ್ಮಾಸನವು ಸುಮ್ಮನೆ ಕುಳಿತುಕೊಳ್ಳುವ ಯೋಗಾಸನವಾಗಿದ್ದು, ಜೀರ್ಣ ಶಕ್ತಿಯನ್ನು ಇದು ಹೆಚ್ಚಿಸುತ್ತದೆ. ಯಾವುದೇ ರೀತಿಯ ಸ್ನಾಯುಗಳ ಮೇಲಿನ ಒತ್ತಡವನ್ನು ನಿವಾರಿಸಿ, ರಕ್ತದೊತ್ತಡವನ್ನೂ ಸಾಮಾನ್ಯ ಸ್ಥಿತಿಗೆ ತರುತ್ತದೆ.

 

ಧನುರಾಸನ

ಧನುರಾಸನವು ಹೊಟ್ಟೆ ಸ್ನಾಯುಗಳನ್ನು ವಿಸ್ತರಣಗೊಳಿಸಿ ಬಲಿಷ್ಠವಾಗಿಸುತ್ತದೆ. ದೇಹದಲ್ಲಿ ಶೇಖೃತವಾದ ಒತ್ತಡವೇನಾದರೂ ಇದ್ದರೆ, ಅದನ್ನು ಬಿಡುಗಡೆಗೊಳಿಸುವುದಲ್ಲದೆ,ಬೆನ್ನನ್ನೂ ಬಲಿಷ್ಠವಾಗಿಸುತ್ತದೆ.

ನೌಕಾಸನ

ಈ ಆಸನವು ಕಿಬ್ಬೊಟ್ಟೆಯ ಭಾಗದ ಅಂಗಗಳು ಬಲಗೊಳಿಸಿ, ಜೀರ್ಣ ಕ್ರಿಯೆಯನ್ನು ಹೆಚ್ಚಿಸುತ್ತದೆ ಹಾಗೂ ಬೆನನ್ನು ಬಲಗೊಳಿಸುತ್ತದೆ.

 

ಸೇತುಬಂಧಾಸನ

ಸೇತು ಬಂಧಾಸನವು ಹೊಟ್ಟೆಯ ಸ್ನಾಯುಗಳನ್ನು ಪ್ರಚೋದಿಸಿ, ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಈ ಯೋಗಾಸನದಿಂದ ದೇಹದ ಆತಂಕ, ಒತ್ತಡ ಮತ್ತು ಖಿನ್ನತೆಯ ಬಿಡುಗಡೆಯಾಗುತ್ತದೆ..

ಪವನಮುಕ್ತಾಸನ

ಹೊಟ್ಟೆ ಗಾಳಿಯನ್ನು ಬಿಡುಗಡೆ ಮಾಡುವ ಈ ಆಸನವು ಹೊಟ್ಟೆ ಅಂಗಾಂಗಗಳನ್ನು ತೀಡಿ, ಬಲಿಷ್ಠವಾಗಿರುತ್ತದೆ. ಈ ಯೋಗಾಸನವು ಹೊಟ್ಟೆಯ ಗಾಳಿಯನ್ನು ಬಿಡುಗಡೆ ಮಾಡಿ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.

 

 

ಆಯುರ್ವೇದ - ಆರೋಗ್ಯಕರವಾದ ಶೈಲಿ

 

ಯೋಗಾಭ್ಯಾಸವನ್ನು ಮಾಡುವಾಗ ನಿಮ್ಮ ಜೀವನಶೈಲಿಯಲ್ಲಿ ಆಯುರ್ವೇದವನ್ನೂ ಅಳವಡಿಸಿಕೊಳ್ಳುವುದು ಮುಖ್ಯ. ಆಯುರ್ವೇದಕ್ಕೆ ಅನುಗುಣವಾಗಿ ಜೀವನಶೈಲಿಯ ಅಭ್ಯಾಸಗಳನ್ನು ಪಾಲಿಸಿದರೆ, ದೇಹದ ಪ್ರಕೃತಿಯು ಸದಾ ಸಮತೋಲನದಲ್ಲಿರುತ್ತದೆ, ಆಯುರ್ವೇದವು ಖಾಯಿಲೆಗಳನ್ನು ಹೇಗೆ ತಡೆಗಟ್ಟುವುದು ಎಂಬುದರ ಬಗ್ಗೆ ನಮಗೆ ಜ್ಞಾನವನ್ನು ನೀಡುವುದಲ್ಲದೆ, ಖಾಯಿಲೆ ಬಂದರೆ, ಅದರ ಮೂಲಕಾರಣದ ನಿರ್ಮೂಲನವನ್ನು ಹೇಗೆ ಮಾಡುವುದೆಂದೂ ತಿಳಿಸಿಕೊಡುತ್ತದೆ.

ಯೋಗವು ಒಂದು ಪರಿಣಾಮಕಾರಕವಾದ ಪ್ರಕ್ರಿಯೆಯಾಗಿರುವುದಲ್ಲದೆ, ಜೀರ್ಣಶಕ್ತಿಯನ್ನು ಸುಧಾರಿಸಿ, ಇಡೀ ದೇಹವನ್ನು ಸುಸ್ಥಿತಿಗೆ ತರುತ್ತದೆ. ಇತರ ದೈಹಿಕ ವ್ಯಾಯಾಮಗಳನ್ನು ನೀವು ಮಾಡುತ್ತಿದ್ದಲ್ಲಿ, ಅದರೊಡನೆ ಯೋಗಾಸನಗಳನ್ನೂ ಸೇರಿಸಿಕೊಳ್ಳಬಹುದು. ಇತರ ದೈಹಿಕ ಚಟುವಟಿಕೆಗಳಂತೆಯೆ ಯೋಗದ ಪ್ರಭಾವವು ಪ್ರಕಟವಾಗಲು ಸ್ವಲ್ಪ ಸಮಯ ಹಿಡಿಯುತ್ತದೆ. ಯೋಗಾಸನಗಳ ನಿತ್ಯಾಭ್ಯಾಸದಿಂದ ಜೀರ್ಣಶಕ್ತಿ ಸುಧಾರಿಸುತ್ತದೆ, ದೇಹವು ಸುಸ್ಥಿತಿಗೆ ಬರುವುದಲ್ಲದೆ, ದೇಹದ ನಮ್ಯತೆಯೂ ಹೆಚ್ಚುತ್ತದೆ.

ಆದ್ದರಿಂದ, ಪ್ರತಿನಿತ್ಯ ಅರ್ಧ ಗಂಟೆಯನ್ನು ನಿಮ್ಮ ಯೋಗಾಸನದ ಚಾಪೆಯ ಮೇಲೆ, ಈ ಯೋಗಾಸನಗಳನ್ನು ಮಾಡುತ್ತಾ ವಿಶ್ರಮಿಸಿ ಮತ್ತು ಜೀರ್ಣಶಕ್ತಿಯನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಿ.

ಯೋಗಾಭ್ಯಾಸದಿಂದ ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯ ಅಭಿವ್ರುದ್ದಿಯಗುವುದಾದರು ಇದು ನೀವು ತೆಗೆದುಕೊಳ್ಳಲೇಬೇಕಾದ ಔಷದಗಳಿಗೆ ಪರ್ಯಾಯವಲ್ಲ. ಯೋಗದ ಆಸನಗಳನ್ನು/ ಭಂಗಿಗಳನ್ನು ನುರಿತ ಜೀವನ ಕಲಾ ಯೋಗ ತರಬೇತಿದಾರರಿಂದ ಕಲಿತುಕೊಳ್ಳುವ ಅವಶ್ಯಕತೆಯಿದೆ. ಆರೋಗ್ಯ ತೊಂದರೆಗಳಿದ್ದಲ್ಲಿ, ವ್ಯೆದ್ಯರ ಸಲಹೆ ಪಡೆದ ನಂತರ, ಯೋಗ ತರಬೇತಿದಾರರ ನಿಗಾವಣೆಯಲ್ಲಿ ಅಭ್ಯಾಸ ಮಾಡಿ.
ಜೀವನ ಕಲಾ ಯೋಗ ಕಾರ್ಯಕ್ರಮಗಳನ್ನು ನಿಮ್ಮ ಸಮೀಪದ ಜೀವನ ಕಲೆ ಶಿಬಿರದ ಕೇಂದ್ರದಲ್ಲಿ ಕಲಿತುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಅಥವಾ ನಿಮ್ಮ ಅನಿಸಿಕೆ/ ಅನುಭವಗಳನ್ನು ಹಂಚಿಕೊಳ್ಳಲು ನಮ್ಮನ್ನು info@artoflivingyoga.in ನಲ್ಲಿ ಸಂಪರ್ಕಿಸಿ.