ಯುವಕರ ಸಶಕ್ತೀಕರಣ ಶಿಬಿರ - ಭಾಗ 2 (ವೈ.ಇ.ಎಸ್. - 2)

ಜ್ಞಾನ ಮತ್ತು ಧ್ಯಾನಗಳಲ್ಲಿ ಮುಳುಗಿ! ಬಲಿಷ್ಠ ಮತ್ತು ನಿರ್ಭೀತರಾಗಿ, ನಿಮಗೆ, ನಿಮ್ಮ ಕುಟುಂಬಕ್ಕೆ ಹಾಗೂ ನಿಮ್ಮ ದೇಶಕ್ಕೆ ಉಪಯುಕ್ತರಾಗಿ. ಈ ಶಿಬಿರದಲ್ಲಿನ ಸರಳ ಪ್ರಕ್ರಿಯೆಗಳು ಮತ್ತು ಸೂಕ್ಷ್ಮ ಮಾರ್ಗದರ್ಶನವು ನಿಮ್ಮ ಭಯ ಮತ್ತು ಸೀಮಿತ ಶಕ್ತಿಯನ್ನು ಮಣಿಸಲು ಸಹಾಯಕ. ಅಲ್ಲದೇ ನಿಮ್ಮೊಳಗಿನ  ಹೊಸ ಆಯಾಮದ ಅನುಭವವನ್ನು ನೀಡುವುದು.

ವೈ.ಇ.ಎಸ್. - 2 ಶಿಬಿರವು ನಿಮ್ಮೊಳಗೆ ಹಾಗೂ ನಿಮ್ಮನ್ನೂ ಮೀರಿ ನೋಡುವ ಅವಕಾಶವನ್ನು ಕಲ್ಪಿಸುತ್ತದೆ. ನಿಮ್ಮನ್ನು ನೀವು ಅರ್ಥೈಸಿಕೊಂಡು ಸಂಬಂಧಗಳು, ಕೌಟುಂಬಿಕ ಕಲಹಗಳು, ದುಶ್ಚಟಗಳು, ವ್ಯಸನಗಳು, ಶೈಕ್ಷಣಿಕ ಸಮಸ್ಯೆಗಳು ಮುಂತಾದ  ನಿಮ್ಮ ಮಾನಸಿಕ ನಿರ್ಬಂಧಗಳಿಂದ ಹೊರಬರಬಹುದು. ಸೇವೆಯನ್ನು ಮಾಡುವುದರಲ್ಲಿರುವ ಸಂತೋಷ, ಮೌನದಲ್ಲಿರುವ ಸ್ವಾತಂತ್ರ್ಯ ಹಾಗೂ ಧ್ಯಾನದಿಂದುಂಟಾಗುವ ಬುದ್ಧಿಶಕ್ತಿಯ ತೀಕ್ಶ್ಣತೆಯ ಅನುಭೂತಿಯನ್ನು ಪಡೆಯಿರಿ.

  • ಪ್ರಯೋಜನಗಳು
  • ಮೇಲ್ನೋಟ
  • ಶಿಬಿರದ ರೂಪರೇಖೆ
    • ಶರೀರ, ಮನಸ್ಸು ಮತ್ತು ಬುದ್ಧಿಯ ಪುನಸ್ಚೇತನ
    • ಕೇವಲ ನಿಮ್ಮ ಬಗ್ಗೆ ಅಲ್ಲದೇ ಇತರರ ಬಗ್ಗೆಯೂ ಯೋಚನೆ ಮಾಡುವ ಸೌಜನ್ಯ
    • ಮಾನಸಿಕ ನಿರ್ಬಂಧ ಮತ್ತು ಭಯಗಳಿಂದ ಮುಕ್ತಿ
    • • ಸೇವೆಯಿಂದ ಸಿಗುವ ಅನಂದದ ಅನುಭವ
    • ವಯೋಮಿತಿ: 13ರಿಂದ 18 ವರ್ಷ, ಯೆಸ್ ಶಿಬಿರವನ್ನು ಮುಗಿಸಿರಬೇಕು
    • ಶಿಬಿರದ ಅವಧಿ: ೪ ದಿನಗಳು,
    • ದಿನಕ್ಕೆ 6 ಘಂಟೆಗಳು (ವಸತಿ ಶಿಬಿರ)
    • ಸುದರ್ಶನ ಕ್ರಿಯೆ
    • ಧ್ಯಾನ
    • ಮಂತ್ರಜಪ
    • ಸಂವಹನ ಪ್ರಕ್ರಿಯೆಗಳು
    • ತಂಡ ಕ್ರೀಡೆಗಳು
    • ಸೇವಾ ಯೋಜನೆಗಳು
    • ಹೊರಾಂಗಣ ಚಟುವಟಿಕೆಗಳು