ಧ್ಯಾನವು ಬುದ್ಧಿ ಸೂಕ್ಷ್ಮತೆಯನ್ನು ವೃದ್ಧಿಸಬಲ್ಲದು

ನಮ್ಮ ಗತ ಜೀವನದ ದಿನಗಳನ್ನು ಗಮನಿಸಿದಾಗ ಬೇರೆಯವರ ಟೀಕೆಗಳಿಗೆ, ಅಭಿಪ್ರಾಯಗಳಿಗೆ ಒಳಪಟ್ಟ ಅನೇಕ ಕ್ಷಣಗಳು ಕಾಣುತ್ತವೆ. “ಅದು ನಿಜವಾಗಿಯೂ ನಿನ್ನ ಜಾಣತನವಾಗಿತ್ತು.” “ಸೂಕ್ಷ್ಮಬುದ್ಧಿಯ ಯೋಚನೆ.” ಅಥವಾ “ನೀನು ಜಾಣ್ಮೆಯುಳ್ಳ ವ್ಯಕ್ತಿ.” ಈ ಕ್ಷಣಗಳು ಹೆಮ್ಮೆಯಿಂದ, ಹೊಗಳುವಿಕೆಯಿಂದ ತುಂಬುತ್ತವೆ. ತನ್ನಂಬಿಕೆ ಉಳ್ಳವನನ್ನಾಗಿ ಮಾಡುತ್ತವೆ. ಇದು ನಿಮಗೆ ಆಗಾಗ್ಗೆ ಆಗಬೇಕೆಂದು ಅನಿಸುವುದಲ್ಲವೇ? ನೀವು ನಿಮ್ಮ ದಿನನಿತ್ಯದ ಕಾರ್ಯಗಳನ್ನು ಕುಶಲತೆಯಿಂದ, ಚಾತುರ್ಯದಿಂದ ನಿರ್ವಹಿಸಿ, ನಕ್ಷತ್ರಗಳ ಮಧ್ಯದಲ್ಲಿ ಚಂದಿರನಾಗಿರಲು ಆಶಿಸುವುದಿಲ್ಲವೇ? ನಮಗೆಲ್ಲ ಖಂಡಿತ ಈ ರೀತಿ ಆಗಬೇಕೆಂಬ ಬಯಕೆ ಇದೆ. ಈ ಮೇಲ್ಮಟ್ಟಕ್ಕೆ (ಎತ್ತರದ ಹಂತಕ್ಕೆ) ಒಂದು ಚಿಕ್ಕ ಮಾರ್ಗ. ಇದಕ್ಕೆ ಮುಖ್ಯವಾದ ನಿಯಮ, ವಿಧಿಬದ್ಧವಾದ ‘ಧ್ಯಾನ.’ ವ್ಯವಸ್ಥಿತ ಧ್ಯಾನವು ಮನಸ್ಸನ್ನು ನುಣುಪುಗೊಳಿಸಿ ದಕ್ಷತೆಯಿಂದ ಪರಿಣಾಮಕಾರಿ ಮನಸ್ಸನ್ನಾಗಿ ಪ್ರತಿಬಿಂಬಿಸುತ್ತದೆ.

#1 – ಶುಭ್ರ ಹಾಗೂ ಸ್ಫಟಿಕದಂತ ಮನಸ್ಸು

ನಮ್ಮ ಮನಸ್ಸು ಭೂತಕಾಲದ ವಿಚಾರ- ಅನುಭವಗಳ, ಭವಿಷ್ಯದ ನಿರೀಕ್ಷೆಗಳ, ವರ್ತಮಾನದ ಪರಸ್ಪರ ವಿಚಾರ ವಿನಿಮಯಗಳ ಒಂದು ಕನ್ನಡಿ. ಅದನ್ನು ಏಕಕಾಲಕ್ಕೆ ಸಂಪೂರ್ಣ ಕಾರ್ಯನಿರತವಾಗಿ ಹಾಗೂ ಪರಿಣಾಮಕಾರಿಯಾಗಿ ಇಡುವುದು ಪ್ರಯಾಸಕರ. ಧ್ಯಾನವು ಈ ಪ್ರವೃತ್ತಿಗಳನ್ನು ತ್ಯಜಿಸಲು ಸಹಾಯ ಮಾಡುತ್ತದೆ. ಧ್ಯಾನವು ನಿಮ್ಮನ್ನು ನಿಮ್ಮ ಮೂಲದೊಡನೆ ಸಂಪರ್ಕಿಸುತ್ತದೆ ಹಾಗೂ ಸಹಜವಾಗಿರಲು ಸಹಾಯ ಮಾಡುತ್ತದೆ. ಧ್ಯಾನವು ಒಂದು ಸರಳವಾದ ಮಾನಸಿಕ ಆರೋಗ್ಯವಿಜ್ಞಾನ ಅಷ್ಟೇ. ಅನುಚಿತ ವಿಚಾರಗಳನ್ನು ಹೊರಹಾಕಿ. ನಿಮ್ಮಲ್ಲಿರುವ ಪ್ರತಿಭೆ,  ಕೌಶಲ್ಯಗಳನ್ನು ಉತ್ತಮಪಡಿಸಿಕೊಳ್ಳಿ ಹಾಗೂ ನಿಮ್ಮೊಂದಿಗೆ ನೀವು ಬೆರೆಯಿರಿ. ದಿನನಿತ್ಯ ಧ್ಯಾನವನ್ನು ಅಭ್ಯಾಸ ಮಾಡುವುದರಿಂದ ಮಾನಸಿಕ ಹೊರೆಯು ಕಮ್ಮಿಯಾಗುತ್ತದೆ, ಎಲ್ಲವನ್ನೂ ವಿಶಾಲ ದೃಷ್ಠಿಕೋನದಿಂದ ನೋಡಲು ಸಾಧ್ಯವಾಗುತ್ತದೆ. ಯಾವಾಗ ಮನಸ್ಸು ಸ್ವಚ್ಚವಾಗಿರುತ್ತದೆಯೋ ಪ್ರವೃತ್ತಿಗಳಿಂದ ಮುಕ್ತವಾಗಿರುತ್ತದೆಯೋ ಆಗ ಪರಿಸ್ಥಿತಿಗೆ ಹೊಂದಿಕೊಳ್ಳಲು ಮತ್ತು ವಿಷಯಗಳನ್ನು ಗ್ರಹಿಸಲು ಸುಲಭವಾಗುತ್ತದೆ. ಧ್ಯಾನವು ನಮ್ಮ ಯೋಚನಾಶಕ್ತಿಯ ಗುಣಮಟ್ಟವನ್ನು ವೃದ್ಧಿಸಿಕೊಳ್ಳಲು ಸಹಾಯ ಮಾಡುತ್ತದೆ.

#2 – ಕೇಂದ್ರೀಕರಣ ಮತ್ತು ಏಕಾಗ್ರತೆ

ನಮಗೆಲ್ಲ ಒಂದಲ್ಲ ಒಂದು ಸಲ ನಮ್ಮ ಶರೀರದ ಒಳಗಿರುವ ಶಕ್ತಿಯುತವಾದ, ಅಸೀಮ ಚೈತನ್ಯದ ಮೂಲವು ಅನುಭವಕ್ಕೆ ಬಂದಿದೆ. ನಮ್ಮೊಳಗೆ ಎಣೆಯಿಲ್ಲದ ಒಂದು ಶಕ್ತಿಯಿದೆ ಎನ್ನುವುದು ಎಲ್ಲರಿಗೂ ಗೊತ್ತು. ಇದರ ಅನುಭವ ಆಗುತ್ತಿದ್ದ ಹಾಗೆ ನಾವು ಇನ್ನೂ ಸಬಲರಾಗುತ್ತೇವೆ. ಧ್ಯಾನವು ಮೂಲದೊಡನೆ ನಮಗಿರುವ ಸಂಬಂಧವನ್ನು ಸ್ಥಿರಪಡಿಸುತ್ತದೆ. ಇದು ನಮ್ಮೊಳಗೆ ಶಾಂತಿ ನೆಲೆಸಲು ಸಹಾಯ ಮಾಡುತ್ತದೆ. ನಮ್ಮ ಮನಸ್ಸು ಸಧೃಡವಾಗುತ್ತದೆ. ಧ್ಯಾನದ ಅಭ್ಯಾಸದಿಂದ ಮನಸ್ಸನ್ನು ತೀಕ್ಷ್ಣವಾಗಿಟ್ಟುಕೊಳ್ಳಬಹುದು, ಕೇಂದ್ರೀಕರಿಸಬಹುದು, ಶಾಂತವಾಗಿಟ್ಟುಕೊಳ್ಳಬಹುದು. ನಮ್ಮ ಕೆಲಸಗಳನ್ನು ಹೆಚ್ಚಿನ ಕುಶಲತೆಯಿಂದ ನಿರ್ವಹಿಸಬಹುದು. “ನಮ್ಮ ಜೀವನದ ಗುಣಮಟ್ಟ ನಮ್ಮ ಮನಸ್ಸಿನ ಗುಣಮಟ್ಟದ ಮೇಲೆ ನಿರ್ಭರವಾಗಿರುತ್ತದೆ.” ಎಂದು ಗುರೂಜಿಯವರು ಹೇಳುತ್ತಾರೆ. ಈ ಪ್ರಪಂಚದಲ್ಲಿ ನಡೆಯುವ ಘಟನೆಗಳನ್ನು ನಾವು ಹತೋಟಿಯಲ್ಲಿಡಲು ಆಗುವುದಿಲ್ಲ. ಆದರೆ, ನಮ್ಮ ಯೋಚನಾ ಶಕ್ತಿಯ ಗುಣಮಟ್ಟವನ್ನು ಧ್ಯಾನದ ಮೂಲಕ ಹತೋಟಿಯಲ್ಲಿಡಬಹುದು.

#3 – ಅಂತಃಸ್ಫುರಣ- ಒಳ ಅರಿವು

ಪರಿಪೂರ್ಣ ಸಾಮರಸ್ಯದ ಕ್ಷಣಗಳಲ್ಲಿ ನಮ್ಮ ಒಳಗಿನ ಧ್ವನಿಯು ನಮ್ಮಲ್ಲಿ ಅಸಾಧಾರಣವಾದ ಯೋಚನೆಗಳನ್ನು, ಅಭಿಪ್ರಾಯಗಳನ್ನು, ಉಪಾಯಗಳನ್ನು ಹೊಮ್ಮಿಸುತ್ತದೆ. ಅದು ನಮ್ಮ ಗ್ರಹಿಕೆಯನ್ನು ತಿಕ್ಕಿ ತೊಳೆದು, ಅರಿವು ಅರಳುವಂತೆ ಮಾಡುತ್ತದೆ.  ವಿಸ್ತಾರವಾಗಿದ್ದಂತೆ ಸಹಜವೂ ಆಗಿದೆ. ವಿಚಾರಗಳು ಒಳಗಿನಿಂದಲೇ ಹರಿದು ಬರಲಾರಂಭಿಸುತ್ತವೆ, ಒಳಮನಸ್ಸು ಮಾತನಾಡುತ್ತಿರುವ ಹಾಗೆ ಅನ್ನಿಸುತ್ತದೆ. “ಒಳ ಅರಿವು” ಮಾನವನ ಮನಸ್ಸಿಗೆ ಒಂದು ವರಪ್ರಸಾದ. ಸಂಶೋಧನೆಯ ಪ್ರಕಾರ ಸಹಜಜ್ಞಾನವು (ಇಂಟ್ಯೂಟಿವ್ ಮೈಂಡ್) ನಿಮ್ಮನ್ನು ವಿಚಾರಶೀಲ, ತೀಕ್ಷ್ಣಮತಿ ಹಾಗೂ ಸೂಕ್ಷ್ಮಗ್ರಾಹಿಯನ್ನಾಗಿ ಮಾಡುತ್ತದೆ. ವಿಟಾಮಿನ್ ‘ಎ’ ಗೆ ಕ್ಯಾರಟ್ ಹೇಗೋ ಹಾಗೆ ಒಳ ಅರಿವಿಗೆ ಧ್ಯಾನ. ಧ್ಯಾನವು ನೀವು ಸಹಜವಾಗಿ, ಸಮರ್ಥವಾಗಿ ಚಿಂತಿಸಿ ಸ್ಪಂದಿಸಲು ಉತ್ತೇಜಿಸುತ್ತದೆ.

ಸಾರಾ. ಡಬ್ಲ್ಯೂ. ಲಾಜರ್ ಹಾಗೂ ಅವರ ತಂಡದವರು ನಡೆಸಿದ ಸಂಶೋಧನೆಯ ಪ್ರಕಾರ (National Institute of Health USA) ಧ್ಯಾನವು Cortical thickness ನ್ನು ಹೆಚ್ಚಿಸುವುದರ ಮೂಲಕ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಐಲೀನ್ ಲುಡರ್ಸ್ ರವರು ನಡೆಸಿದ ಇನ್ನೊಂದು ಸಂಶೋಧನೆಯ ಪ್ರಕಾರ ಧ್ಯಾನವು ಮಾನವನ ಆಲೋಚನಾ ಸಾಮರ್ಥ್ಯಕ್ಕೆ, ಬುದ್ಧಿಮತ್ತೆಗೆ ಮೂಲವಾದ ಬೂದು ದ್ರವ್ಯದ (grey matter) ಬೆಳವಣಿಗೆಯನ್ನು ಉತ್ತೇಜಿಸುತ್ತದೆ

 

#4 – ಸೃಜನಶೀಲತೆಯ ಸ್ಫೋಟ

ಸೃಜನಶೀಲತೆಯು ಯಾವಾಗ ಸ್ಫೊಟಗೊಳ್ಳುವುದೆಂದು ನೀವು ಗಮನಿಸಿದ್ದೀರಾ? ಸರೋವರದ ಪಕ್ಕದಲ್ಲಿ ನಡೆಯುವಾಗ, ತುಂತುರು ಮಳೆಯ ಮಧ್ಯದಲ್ಲಿ ಅಥವಾ ನಿಮಗೆ ಪ್ರಿಯವಾದ ಸಂಗೀತದಲ್ಲಿ ಲೀನವಾಗಿದ್ದಾಗ. ನಿಯಂತ್ರಣವನ್ನು ಕಳೆದುಕೊಳ್ಳುವುದರಲ್ಲಿಯೇ ನಿಜಕ್ಕೂ ಅಡಗಿದೆ ಸೃಜನಶೀಲರಾಗುವ ಉಪಾಯ: ಅಪ್ರಯತ್ನ, ಆರಾಮ ಮತ್ತು ಸ್ವಾಸ್ಥ್ಯ. ಹತೋಟಿ ಆಯಾಸಕರ. “ಆದರೆ ಮಿದುಳಿನ ಪ್ರತಿಬಿಂಬದ ಸಂಶೋಧನೆಯ ಪ್ರಕಾರ, ವಿಶ್ರಾಮವು ಚೈತನ್ಯವನ್ನು ಮರುಪೂರಣ ಮಾಡುವುದಲ್ಲದೇ ಜ್ಞಾಪಕ ಶಕ್ತಿಯನ್ನೂ ಗ್ರಹಣಶಕ್ತಿಯನ್ನೂ ಹೆಚ್ಚಿಸುತ್ತದೆ,” ಎಂದು ಪ್ರಸಿದ್ಧ ವಿಜ್ಞಾನಿ ಮತ್ತು ಸಂಶೋಧಕರಾದ ಎಮಾ ಸೆಫಾಲ (Stanford University) ಅವರು ಹೇಳುತ್ತಾರೆ. ನಿಮ್ಮಲ್ಲಿ ಸೃಜನಶೀಲತೆ ಹೆಚ್ಚಾಗಿದ್ದಷ್ಟು ನೀವು ಕೆಲಸದಲ್ಲಿ ಅದ್ವಿತೀಯ ಹಾಗೂ ಅತ್ಯಗತ್ಯರಾಗುತ್ತೀರಿ.

#5 – ಮಧ್ಯಮ ಮಾರ್ಗ

ಬೀದಿಯ ಕೊನೆಯ ಬೇಕರಿಯಲ್ಲಿ ತಯಾರಿಸಿದ ಪಿಜ್ಜಾವನ್ನು ನಾವು ತಂದು ಆನಂದಿಸಬೇಕಾದರೆ ರೊಟ್ಟಿಯನ್ನು ಹದವಾಗಿ ಬೇಯಿಸಿ ಅದರ ಮೇಲೆ ಅಚ್ಚುಕಟ್ಟಾಗಿ ಕತ್ತರಿಸಿದ ತರಕಾರಿಗಳನ್ನು, ಸರಿಯಾದ ಪ್ರಮಾಣದಲ್ಲಿ ಸ್ವಾದಿಷ್ಟ ‘ಚೀಸ್’ ಮತ್ತು ‘ಸಾಸ್’ ಗಳನ್ನು ಬೆರೆಸಿ, ಒರೆಗಾನೊ ಮತ್ತು ಮೆಣಸಿನ ಚಿಕ್ಕ ಚೂರುಗಳನ್ನು ಸೇರಿಸಿ ಮಾಡಿರಬೇಕು. ಅದೇ ರೀತಿ ಅದ್ವಿತೀಯ, ಹಾಗೂ ಸೂಕ್ಷ್ಮ ವಿವೇಚನಾ ಶಕ್ತಿಗಳನ್ನು ಸಮತೋಲನದಲ್ಲಿ ಪೋಷಿಸಬೇಕು. ಅವುಗಳಿಗೆ ತಮ್ಮದೇ ಆದ ಒಂದು ಶೈಲಿಯಿದೆ. ಧ್ಯಾನವು  ವಿವೇಚನಾ ಶಕ್ತಿಯನ್ನು ಸಮತೋಲನದಲ್ಲಿಟ್ಟುಕೊಳ್ಳಲು ಹಾಗೂ ಆ ಶೈಲಿಯನ್ನು ನಿಮ್ಮದಾಗಿಸಿಕೊಳ್ಳಲು ಸಹಾಯ ಮಾಡುತ್ತದೆ. ಧ್ಯಾನವು ಎಡಭಾಗದ ಮತ್ತು ಬಲಭಾಗದ ಮೆದುಳಿನಲ್ಲಿ ಸಮತೋಲನವನ್ನು ತಂದು ನೀವು ವಾಸ್ತವವಾದ, ತರ್ಕಬದ್ಧವಾದ ವಿಶ್ಲೇಷಣೆಯಿಂದ ಸರಿಯಾದ ಮನೋಭಾವನೆಗಳನ್ನು ವ್ಯಕ್ತ ಪಡಿಸಲು ಪ್ರಚೋದಿಸುತ್ತದೆ. ಅದು, ನೀವು ಸರಿಯಾದ ರೀತಿಯಲ್ಲಿ ಮಾತ್ರವಲ್ಲದೇ ತಾಳ್ಮೆಯಿಂದ ಯೋಚಿಸುವ ಹಾಗೆ ಮಾಡುತ್ತದೆ. ಪ್ರಕಾಶ ಎಂಬುವರು ಹೇಳುತ್ತಾರೆ, ”ನಾನು ಮೂರು ವರ್ಷಗಳ ಮುಂಚೆ ಧ್ಯಾನ ಮಾಡುವ ಅಭ್ಯಾಸಕ್ಕೆ ಪರಿಚಿತನಾದೆ. ಆವಾಗಿನಿಂದ ಪ್ರತಿನಿತ್ಯವೂ ಮಾಡುತ್ತೇನೆ. ನಾನು ವೃತ್ತಿಯಿಂದ ವಿನ್ಯಾಸಗಾರ (ಡಿಸೈನರ್). ಈ ವೃತ್ತಿಯಲ್ಲಿರುವ ಪೈಪೋಟಿಯಿಂದ ನಾನು ಪ್ರತಿದಿನವೂ ಹೊಸತನವನ್ನು ತೋರಿಸಿ ಮುನ್ನಡೆಯಬೇಕಾಗಿದೆ. ಧ್ಯಾನವು ನನ್ನ ಚಿತ್ತವನ್ನು ಸ್ಥಿರವಾಗಿಟ್ಟು ಗ್ರಾಹಕರ ನಿರೀಕ್ಷೆಗಳನ್ನು ಪೂರೈಸಲು ಸಹಾಯವಾಗಿದೆ,