ನಿಮ್ಮ ಹದಿವಯಸ್ಸಿನವರನ್ನು ಅರ್ಥಮಾಡಿಕೊಳ್ಳಿ

ಹದಿವಯಸ್ಸಿನವರನ್ನು ತಿಳಿಯಿರಿ ಎನ್ನುವ ಕಾರ್ಯಾಗಾರ 13- 18 ವಯಸ್ಸಿನ ವಯೋಮಿತಿಯಲ್ಲಿರುವ  ಮಕ್ಕಳ ಪೋಷಕರಿಗೆ.


ಹದಿವಯಸ್ಸಿನವರು ಈ ಪ್ರಪಂಚದಲ್ಲಿ ಹೆಚ್ಚು ಸಂತೋಷವಾಗಿರುವ ಮಂದಿ. ಅವರ ಸೃಜನಶೀಲತೆ, ಕನಸು ಮತ್ತು ಪ್ರಬಲವಾದ ಉತ್ಸಾಹದಿಂದ ಪ್ರಪಂಚವನ್ನು ಅನ್ವೇಷಿಸುತ್ತಾರೆ. ಈ ಗುಣಲಕ್ಷಣಗಳೇ ಏಳಿಗೆಗೆ ಬರುತ್ತಿರುವ ವಯಸ್ಕರಲ್ಲಿ  ಕಾಣಬರುತ್ತದೆ. ಅವರ ಆಸಕ್ತಿ ಸಹಜವಾಗಿ ಕಂಪ್ಯೂಟರ್, ಮೊಬೈಲ್ ಫೋನ್, ಇಂಟರ್ನೆಟ್(ಅಂತರ್ಜಾಲ), ಟ್ಯಾಬ್ಗಳಲ್ಲಿ ಆಟ ಆಡುವುದು ಅದರಲ್ಲಿ ಅವರ ಜಾಣತನವನ್ನು ಕಾಣಬಹುದು. ಆದರೂ ಹದಿವಯಸ್ಸಿನವರು ಸುಲಭವಾಗಿ ನಕಾರಾತ್ಮಕವಾದ ಚಟಗಳಿಗೆ ಹಿಂಸಾ ಪಕ್ಷಿಗಳಾಗುತ್ತಾರೆ, ಇದರಿಂದ ತಂದೆ ತಾಯಿಗಳಿಗೆ ಹದಿವಯಸ್ಸಿನವರನ್ನು ಬೆಳೆಸುವುದು ಒಂದು ದೊಡ್ಡ ಸವಾಲಾಗುತ್ತದೆ.

ಹದಿವಯಸ್ಸಿನವರನ್ನು ತಿಳಿಯಿರಿ ಕಾರ್ಯಾಗಾರ ತಂದೆ ತಾಯಿಗಳಿಗೆ ಹದಿವಯಸ್ಸಿನ ಮಕ್ಕಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ, ಮತ್ತು ಅವರ ವರ್ತನೆಗೆ ಮೂಲ ಕಾರಣ ತಿಳಿಯುತ್ತದೆ. ಇದು ಹದಿ ವಯಸ್ಸಿನವರ ಯೋಚನೆ ಹೇಗಿರುತ್ತದೆ ಎಂದು ವಿವರಿಸುತ್ತದೆ. ಯಾವುದನ್ನು ದೊಡ್ಡವರು ಕಡೆಗಣಿಸುತ್ತಾರೋ, ಅದುವೇ ಮಕ್ಕಳ ಮನಸ್ಸಿನಲ್ಲಿ ಆಳವಾದ ಪರಿಣಾಮ ಬೀರುತ್ತದೆ. ಸಂಕ್ಷಿಪ್ತವಾಗಿ ಹೇಳಬೇಕಾದರೆ , ಈ ಕಾಯಗಾರವು ತಂದೆ-ತಾಯಿಂದಿರಿಗೆ ತಮ್ಮ ಹದಿಹರೆಯದ ಮಕ್ಕಳನ್ನು ಕೌಶಲ್ಯದಿಂದ ಯುಕ್ತಿಯಿಂದ ಪೋಷಿಸಲು ಬೇಕಾದ ಸಾಧನಗಳ್ಳನ್ನು  ಕೊಡುತ್ತದೆ.

ಇದರಿಂದ ಆಗುವ ಉಪಯೋಗ

  • ಮಕ್ಕಳಿಂದ ಹದಿವಯಸ್ಸಿಗೆ ಆಗುವ ಪರಿವರ್ತನೆಯನ್ನು ನಿರ್ವಹಿಸು ವುದು
    ಹದಿವಯಸ್ಸಿನವರ ಜೀವನದಲ್ಲಿ ಭಾಗಿಯಾಗುವುದು - ಶಾರೀರಕವಾಗಿ ಮತ್ತು ಭಾವನಾತ್ಮಕವಾಗಿ.
    “ಅವರು ಹೊಸ ಪ್ರವೃತ್ತಿಯಲ್ಲಿ ಇದ್ದರೆ , ಅವರನ್ನು ಬೇರೆ ಹದಿವಯಸ್ಸಿನವರು ತಮ್ಮೊಂದಿಗೆ ಸೇರಿಸಿಕೊಳ್ಳುತ್ತಾರೆ” ಎಂಬ ಅವರ ಭಾವನೆಯನ್ನು ಅರ್ಥ ಮಾಡಿಸುತ್ತದೆ.
    ನಿಮ್ಮ ಮಗು ಭಾವನಾತ್ಮಕವಾಗಿ ಆರೋಗ್ಯವಾಗಿ ಇರಲು ಸಹಾಯ ಮಾಡುತ್ತಿರ.
    ನಿಮ್ಮ ಮಗುವಿಗೆ ಸ್ನೇಹಿತನಾಗಿ, ಗುರುವಾಗಿ ಅವರ ಜೀವನೋಪಾಯದ ಮಾರ್ಗವನ್ನು ಅಥವಾ ಉದ್ಯೋಗವನ್ನು ಆಯ್ಕೆ ಮಾಡುವಾಗ ಸಹಾಯ ಮಾಡಿ. ಒಟ್ಟಿನ ಅಭಿಪ್ರಾಯ
  • ಇದು 3 ಗಂಟೆಗಳ ಕಾರ್ಯಾಗಾರವಾಗಿದ್ದು, 13 - 18 ವರ್ಷದ ಹದಿವಯಸ್ಸಿನ ಪೋಷಕರಿಗಾಗಿ